ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆಯೇ ಇದೀಗ ”ಹರ್ಡ್‌ ಇಮ್ಯುನಿಟಿ ” ಎಂಬ ವಿಷಯದ ಕುರಿತು ಬಹಳಷ್ಟು ಚರ್ಚೆಗಳು, ವಾದ ವಿವಾದಗಳು ನಡೆಯುತ್ತಿವೆ. ಅಷ್ಟಕ್ಕೂ ಈ ”ಹರ್ಡ್‌ ಇಮ್ಯುನಿಟಿ ” ಎಂದರೇನು ಅನ್ನೋದ್ರ ಬಗ್ಗೆ ತಿಳಿಯೋದಾದ್ರೆ ”ಕೊರೊನಾ ವೈರಸ್‌ನಂಥ ವೈರಸ್‌ಗಳು ದಾಳಿ ಮಾಡಿದಾಗ ಸಮುದಾಯ ಪ್ರತಿರೋಧಕ ಶಕ್ತಿ ಸೃಷ್ಟಿಸಿ, ಅಂದರೆ ಜನತೆಯಲ್ಲಿ ರೋಗನಿರೋಧಕ ಶಕ್ತಿ ಬೆಳೆಸಿ ಸೋಂಕು ಹರಡುವುದನ್ನು ನಿಯಂತ್ರಿಸುವುದನ್ನು ಹರ್ಡ್‌ ಇಮ್ಯುನಿಟಿ ” ಎಂದು ಕರೆಯಲಾಗುತ್ತದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಬಹುಪಾಲು ಜನರಿಗೆ ಸೋಂಕು ಹಬ್ಬಿದಾಗ ತನ್ನಿಂತಾನೆ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಅದನ್ನು ಹರ್ಡ್‌ ಇಮ್ಯುನಿಟಿ ಎನ್ನಲಾಗುತ್ತದೆ. ಇದನ್ನು ಮೊತ್ತ ಮೊದಲ ಬಾರಿಗೆ 1930ರಲ್ಲಿಅಮೆರಿಕದ ಬಾಲ್ಟಿಮೋರ್‌ನ ಮಕ್ಕಳು ದಡಾರಕ್ಕೆ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿದ್ದನ್ನು ಅಧ್ಯಯನ ನಡೆಸಿದ್ದ ಸೋಂಕು ತಜ್ಞ ಎ ಡಬ್ಲ್ಯು ಹೆಡ್ರಿಕ್‌ ಗುರುತಿಸಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಬಾರಿ ಇದರ ಪ್ರಯೋಗ ನಡೆದಿದೆ. ಮಕ್ಕಳಿಗೆ ದಡಾರ ಬಂದಾಗ ರೋಗನಿರೋಧಕ ಶಕ್ತಿ ಬೆಳೆಯುವಂತೆ ಮಾಡಿ, ಇದಕ್ಕೆ ಕಾರಣವಾಗುವ ವೈರಾಣುವನ್ನು ನಿಯಂತ್ರಿಸಲಾಗಿದೆ. ಇದೇ ರೀತಿಯಾಗಿ ಈಗಾಗಲೇ ನಾರ್ವೆ ದೇಶದ ಜನತೆ ಎಚ್‌1ಎನ್‌1ಗೆ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆ. ಅದೇ ರೀತಿ ಈ ಕೊರೊನಾ ಸಂದರ್ಭದಲ್ಲಿ ಭಾರತದಲ್ಲೂ ಇದರ ಪ್ರಯೋಗ ನಡೆಸಬಹುದಲ್ಲವೇ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.. ಭಾರತ ಯುವ ಜನತೆಯ ರಾಷ್ಟ್ರವಾಗಿರುವುದರಿಂದ ಕೊರೊನಾ ವೈರಸ್‌ ವಿರುದ್ಧ ಈ ತಂತ್ರ ಬಳಸಿ, ರೋಗ ನಿಯಂತ್ರಿಸಬಹುದು. ಹೆಚ್ಚಿನ ಅಪಾಯ ಎದುರಿಸುತ್ತಿರುವ ವೃದ್ಧರನ್ನು ರಕ್ಷಿಸುವುದರ ಜತೆಗೆ ದೇಶದ ಆರ್ಥಿಕತೆಗೂ ದೊಡ್ಡ ಹೊಡೆತ ಬೀಳದಂತೆ ಎಚ್ಚರಿಕೆ ವಹಿಸಬಹುದು ಎಂಬುದು ಕೆಲ ತಜ್ಞರ ಅಭಿಪ್ರಾಯ.

#HerdImmunity #Coronavirus #COVID19

Our Website :
Facebook:
Twitter: